Thursday, April 16, 2026
Home ಅಪರಾಧದಾವಣಗೆರೆ: ನಕಲಿ ಬಂಗಾರದ ಮೋಸಗಾರರ ಬಂಧನ; 5.90 ಲಕ್ಷ ರೂ. ಸ್ವತ್ತು ವಶ

ದಾವಣಗೆರೆ: ನಕಲಿ ಬಂಗಾರದ ಮೋಸಗಾರರ ಬಂಧನ; 5.90 ಲಕ್ಷ ರೂ. ಸ್ವತ್ತು ವಶ

by admin
0 comments

ದಾವಣಗೆರೆ, ಡಿಸೆಂಬರ್ ೧೪, ೨೦೨೫: ನಕಲಿ ಬಂಗಾರವನ್ನು ನಿಜವಾದದ್ದೆಂದು ಸೋಗು ಹಾಕಿ ಲಕ್ಷಾಂತರ ರೂಪಾಯಿ ಮೋಸಮಾಡಿದ ಆರೋಪದ ಮೇಲೆ ಇಬ್ಬರನ್ನು ಹೊನ್ನಾಳಿ ಪೊಲೀಸರು ಬಂಧನೆ ಮಾಡಿದ್ದಾರೆ. ಆರೋಪಿಗಳಿಂದ ರೂ. ೫ ಲಕ್ಷ ೯೦ ಸಾವಿರ ನಗದು, ಒಂದು ಮೊಬೈಲ್ ಫೋನ್ ಮತ್ತು ಅಪರಾಧದಲ್ಲಿ ಬಳಸಿದ ಒಂದು ಬೈಕ್ ವಶಪಡಿಸಿಕೊಳ್ಳಲಾಗಿದೆ.

ಪ್ರಕರಣದ ಹಿನ್ನೆಲೆ:
ಮಂಡ್ಯ ಜಿಲ್ಲೆಮಳವಳ್ಳಿ ತಾಲ್ಲೂಕಿನ ಕುಂದೂರು ನಿವಾಸಿ ವೆಂಕಟೇಶಪ್ಪ (೩೫) ಎಂಬುವವರು ಪೊಲೀಸರಿಗೆ ದೂರು ನೀಡಿದ್ದರು. ಅವರ ದೂರಿನ ಪ್ರಕಾರ, ‘ಮಂಜುನಾಥ’ ಎಂಬ ವ್ಯಕ್ತಿಯೊಬ್ಬರು ತಮಗೆ ಫೋನ್ ಮಾಡಿ, ತಮ್ಮ ಅಜ್ಜನ ಮನೆ ತಗೆಯುವಾಗ ೪ ಕಿಲೋ ಬಂಗಾರ ಸಿಕ್ಕಿದೆ, ಅದರಲ್ಲಿ ಒಂದು ಕಾಲು ಕಿಲೋ ಬಂಗಾರವನ್ನು ಮಾರುಕಟ್ಟೆ ಬೆಲೆಗಿಂತ ಅರ್ಧದಾರೆ ಬೆಲೆಗೆ ನೀಡುತ್ತೇನೆ ಎಂದು ಹೇಳಿದ್ದರು. ನಂತರ ಮೊದಲು ಒಂದು ಬಿಲ್ಲೆಯನ್ನು ಪರೀಕ್ಷಿಸಿಕೊಳ್ಳಲು ಕೊಡುವುದಾಗಿ ಹೇಳಿ, ರೂ. ೬ ಲಕ್ಷ ಮತ್ತು ಮೊಬೈಲ್ ಫೋನ್ ಪಡೆದು, ನಕಲಿ ಬಂಗಾರದ ಬಿಲ್ಲೆಗಳು ತುಂಬಿದ ಗಂಟು ಒಪ್ಪಿಸಿ ಪಲಾಯನ ಮಾಡಿದ್ದರು.

ಪೊಲೀಸರ ಕಾರ್ಯಾಚರಣೆ:
ಈ ದೂರನ್ನುತೀವ್ರತೆರದಲ್ಲಿ ತೆಗೆದುಕೊಂಡ ಹೊನ್ನಾಳಿ ಪೊಲೀಸರು, ಜಿಲ್ಲಾ ಪೊಲೀಸ್ ಮುಖ್ಯಸ್ಥ ಉಮಾ ಪ್ರಶಾಂತ್ ಅವರ ಮಾರ್ಗದರ್ಶನದಲ್ಲಿ ವಿಶೇಷ ತಂಡ ರಚಿಸಿದರು. ತನಿಖೆ ನಡೆಸಿದ ಪೊಲೀಸರು ಡಿಸೆಂಬರ್ ೧೩ರಂದು ಇಬ್ಬರು ಆರೋಪಿಗಳನ್ನು ಗುರುತಿಸಿ ಬಂಧಿಸಿದರು.

ಬಂಧಿತ ಆರೋಪಿಗಳು:
೧.ಪರಶುರಾಮ (೪೩), ಹಾಡೋನಹಳ್ಳಿ, ಶಿವಮೊಗ್ಗ ತಾಲ್ಲೂಕು.
೨.ಮನೋಜ್ @ ಮನು (೨೮), ದಾನಿಹಳ್ಳಿ, ನ್ಯಾಮತಿ ತಾಲ್ಲೂಕು, ಶಿವಮೊಗ್ಗ ಜಿಲ್ಲೆ.

ಆರೋಪಿಗಳ ಹಿಂದೆಲೆ:
ಬಂಧಿತರಲ್ಲಿನ ಪ್ರಮುಖ ಆರೋಪಿಪರಶುರಾಮನ ಮೇಲೆ ಸಾಗರ ಪೊಲೀಸ್ ಠಾಣೆಯಲ್ಲಿ ಹಿಂದೆ ದಾಖಲಾದ ಮೋಸದ ಪ್ರಕರಣ ಇದ್ದು, ಅದರಲ್ಲಿ ಅವನು ಬಿಡುಗಡೆ ಹೊಂದಿದ್ದ. ಈಗ ಅದೇ ಪ್ರಕಾರದ ಅಪರಾಧದಲ್ಲಿ ಮತ್ತೆ ಸಿಕ್ಕಿಬಿದ್ದಿದ್ದಾನೆ.

ಪೊಲೀಸ್ ಅಧಿಕಾರಿಗಳ ಪ್ರತಿಕ್ರಿಯೆ:
ಜಿಲ್ಲಾಪೊಲೀಸ್ ಮುಖ್ಯಸ್ಥೆ ಉಮಾ ಪ್ರಶಾಂತ್ ಅವರು ಪ್ರಕರಣವನ್ನು ವೇಗವಾಗಿ ಬಗೆಹರಿಸಿದ ತನಿಖಾ ತಂಡದ ಕೆಲಸಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಮೋಸದ ಪ್ರಕರಣಗಳಲ್ಲಿ ಜಾಗರೂಕರಾಗಿರಲು ಹಾಗೂ ಅನುಮಾನಾಸ್ಪದ ಪ್ರಸ್ತಾಪಗಳಿಗೆ ಸುಲಭವಾಗಿ ನಂಬಿಕೆ ಇಡದಿರಲು ಸಾರ್ವಜನಿಕರಿಗೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

You may also like

Leave a Comment