Monday, June 1, 2026
Home ಸುದ್ದಿದಾವಣಗೆರೆ: ನಕಲಿ ಬಂಗಾರ ನೀಡಿ ವಂಚನೆ; ಓರ್ವ ಆರೋಪಿ ಬಂಧನ: 7.50 ಲಕ್ಷ ನಗದು ವಶ

ದಾವಣಗೆರೆ: ನಕಲಿ ಬಂಗಾರ ನೀಡಿ ವಂಚನೆ; ಓರ್ವ ಆರೋಪಿ ಬಂಧನ: 7.50 ಲಕ್ಷ ನಗದು ವಶ

by admin
0 comments

ದಾವಣಗೆರೆ: ನಕಲಿ ಬಂಗಾರದ ಮೂಲಕ ವಂಚಿಸಿದ ಪ್ರಕರಣದಲ್ಲಿ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯಿಂದ ₹7,50,000 ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ.

ದಾವಣಗೆರೆ ಜಿಲ್ಲೆಯ ಮಾಯಕೊಂಡ ಪೊಲೀಸ್ ಠಾಣಾ ವ್ಯಾಪ್ತಿಯ ಬೆಂಗಳೂರಿನ ರಾಮು.ಎಸ್ (40) ಎಂಬಾತ ದಿನಾಂಕ: 20/02/2026ರಂದು ಬೆಳಗ್ಗೆ ಬಾಡ ಗ್ರಾಮದ ಬಳಿ ಹತ್ತಿ ನಿಧಿ ಬಂಗಾರ ಸಿಕ್ಕಿದೆ ಎಂದು ಹೇಳಿ, 2 ಕೆ.ಜಿ ತೂಕದ ನಕಲಿ ಬಂಗಾರದ ನಾಣ್ಯವನ್ನು ನೀಡಿ ವಂಚಿಸಿದ್ದ ಬಗ್ಗೆ ಮಾಯಕೊಂಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಪ್ರಕರಣದ ಆರೋಪಿ ಪತ್ತೆಗಾಗಿ ಡಿವೈಎಸ್ಪಿ ಬಸವರಾಜ್. ಬಿ.ಎಸ್ ಅವರ ಮಾರ್ಗದರ್ಶನದಲ್ಲಿ ಮತ್ತು ಮಾಯಕೊಂಡ ವೃತ್ತ ಕಚೇರಿಯ ಸಿ.ಪಿ.ಐ ರಾಘವೇಂದ್ರ ಅವರ ಸಾರಥ್ಯದಲ್ಲಿ ಮಾಯಕೊಂಡ ಪೊಲೀಸ್ ಠಾಣೆಯ ಪಿಎಸ್ಐ ಶಲ ಅಜಯ್.ಎಸ್.ಬಿ ನೇತೃತ್ವದಲ್ಲಿ ಆರೋಪಿ ಪತ್ತೆಗೆ ತಂಡ ರಚಿಸಲಾಗಿತ್ತು.

ಈ ತಂಡ ಪತ್ತೆ ಕಾರ್ಯ ಕೈಗೊಂಡು ಪ್ರಕರಣದ ಆರೋಪಿ 1) ಮಹಮದ್ ಅಲಿ ಅವಟಿ @ ಮಹಮದ್ ರಫೀಕ್ (36), ವಾಸ: ಮುದ್ದೆಬಿಹಾಳ್ ತಾಲ್ಲೂಕು, ಬಿಜಾಪುರ ಜಿಲ್ಲೆ ಎಂಬಾತನನ್ನು ಬಂಧಿಸಲಾಗಿದೆ. ಆರೋಪಿಯಿಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ₹7,50,000/- ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣದಲ್ಲಿ ಇನ್ನೊಬ್ಬ ಆರೋಪಿ ನಾಪತ್ತೆಯಾಗಿದ್ದು, ಪತ್ತೆ ಕಾರ್ಯ ಮುಂದುವರೆದಿದೆ.

ಈ ನಕಲಿ ಬಂಗಾರ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾದ ಮಾಯಕೊಂಡ ಠಾಣೆಯ ಅಪರಾಧ ವಿಭಾಗದ ಸಿಬ್ಬಂದಿಗಳಾದ ಹೇಮ್ಲನಾಯ್ಕ ಎಎಸ್ಐ, ಅಣ್ಣಯ್ಯ, ರಾಮಕೃಷ್ಣ, ಲೋಕೇಶ್, ರಾಜು ಲಮಾಣಿ, ಪರಶುರಾಮ್, ಸಂತೋಷ್ ಕುಮಾರ್, ದಾದಪೀರ್ ಹಾಗೂ ಚಾಲಕ ದಾದಪೀರ್ ಇವರನ್ನು ಪೊಲೀಸ್ ಅಧೀಕ್ಷಕರು ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಪ್ರಶಂಸಿಸಿದ್ದಾರೆ

You may also like

Leave a Comment