Tuesday, June 2, 2026
Home ಅಪರಾಧಆನ್‌ಲೈನ್ ಪಾರ್ಟ್‌ಟೈಂ ಕೆಲಸದ ಹೆಸರಿನಲ್ಲಿ 39 ಲಕ್ಷ ರೂ. ವಂಚನೆ

ಆನ್‌ಲೈನ್ ಪಾರ್ಟ್‌ಟೈಂ ಕೆಲಸದ ಹೆಸರಿನಲ್ಲಿ 39 ಲಕ್ಷ ರೂ. ವಂಚನೆ

by admin
0 comments

ದಾವಣಗೆರೆ: ‘ವರ್ಕ್ ಫ್ರಂ ಹೋಮ್’ ಹೆಸರಿನಲ್ಲಿ ಪಾರ್ಟ್‌ಟೈಮ್ ಕೆಲಸ ಕೊಡುತ್ತೇವೆ ಎಂದು ಆಮಿಷವೊಡ್ಡಿ, ಟೆಲಿಗ್ರಾಂ ಮೂಲಕ ಟಾಸ್ಕ್‌ಗಳನ್ನು ನೀಡುತ್ತಾ ಹೊನ್ನಾಳಿ ತಾಲ್ಲೂಕಿನ ಸಾಸ್ವೆಹಳ್ಳಿ ಗ್ರಾಮದ ಬಟ್ಟೆ ವ್ಯಾಪಾರಿಯೊಬ್ಬರಿಗೆ ₹39.36 ಲಕ್ಷ ವಂಚಿಸಿದ ಘಟನೆ ಬೆಳಕಿಗೆ ಬಂದಿದೆ.

ಘಟನೆಯ ವಿವರ ಹೀಗೆ—
ಅಪರಿಚಿತ ವ್ಯಕ್ತಿಯೊಬ್ಬರು ವ್ಯಾಪಾರಿಗರಿಗೆ ಸಂದೇಶ ಕಳುಹಿಸಿ, “ಪಾರ್ಟ್‌ಟೈಮ್ ವರ್ಕ್ ಫ್ರಂ ಹೋಮ್ ಮಾಡಿದರೆ ಗಂಟೆಗೆ ₹5,800 ಗಳಿಸಬಹುದು” ಎಂದು ಹೇಳಿದ್ದರು. ನಂತರ ಅವರನ್ನು ಟೆಲಿಗ್ರಾಂ ಗುಂಪಿಗೆ ಸೇರಿಸಿ ಅಲ್ಲಿ ನೀಡುವ ಟಾಸ್ಕ್‌ಗಳನ್ನು ಪೂರ್ಣಗೊಳಿಸಿದರೆ ಕಮಿಷನ್ ನೀಡಲಾಗುತ್ತದೆ ಎಂದು ನಂಬಿಸಿದ್ದರು.

ಮೊದಲಿಗೆ ಸ್ವಲ್ಪ ಪ್ರಮಾಣದ ಕಮಿಷನ್ ನೀಡುವ ಮೂಲಕ ವಿಶ್ವಾಸ ಹುಟ್ಟಿಸಿದ ಅವರು, “ಫ್ರೀ ಟಾಸ್ಕ್‌ಗಳು ಮುಗಿದಿವೆ, ಈಗ ಪೇಯ್ಡ್ ಟಾಸ್ಕ್ ಮಾಡಬೇಕು” ಎಂದು ಹೇಳಿ ಹಂತ ಹಂತವಾಗಿ ಹೆಚ್ಚಿನ ಮೊತ್ತವನ್ನು ಕಳೆಯುವಂತೆ ಮಾಡಿದರು. ಈ ರೀತಿ ವ್ಯಾಪಾರಿಯು ಒಟ್ಟು ₹39,36,281 ತೆರಬೇಕಾಗಿ ಬಂದು ಕೊನೆಗೆ ವಂಚನೆಗೆ ಒಳಗಾದರು.

ಘಟನೆಯ ಬಗ್ಗೆ ವ್ಯಾಪಾರಿಯು ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದು, ಪ್ರಕರಣ ದಾಖಲಿಸಲಾಗಿದೆ.

You may also like

Leave a Comment