Thursday, April 16, 2026
Home ದಾವಣಗೆರೆದಾವಣಗೆರೆ: ನಾಳೆ ಸ್ಪರ್ಧಾತ್ಮಕ ಪರೀಕ್ಷೆ; ಕೇಂದ್ರಗಳ ಸುತ್ತ 200 ಮೀಟರ್ ನಿಷೇಧ

ದಾವಣಗೆರೆ: ನಾಳೆ ಸ್ಪರ್ಧಾತ್ಮಕ ಪರೀಕ್ಷೆ; ಕೇಂದ್ರಗಳ ಸುತ್ತ 200 ಮೀಟರ್ ನಿಷೇಧ

by admin
0 comments

ದಾವಣಗೆರೆ: ವಿವಿಧ ಇಲಾಖೆ ಹಾಗೂ ಸಂಸ್ಥೆಗಳ ಖಾಲಿ ಹುದ್ದೆಗಳಿಗೆ ನಾಳೆ (ಜನವರಿ 25) ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಸ್ಪರ್ಧಾತ್ಮಕ ಪರೀಕ್ಷೆ ನಡೆಯಲಿದೆ. ಪರೀಕ್ಷೆ ಸುಗಮವಾಗಿ ನಡೆಸಲು ಎಲ್ಲಾ ಸಿದ್ಧತೆಗಳನ್ನು ಪೂರ್ಣಗೊಳಿಸಲಾಗಿದೆ. ಪರೀಕ್ಷಾ ಕೇಂದ್ರಗಳ ಸುತ್ತಲೂ 200 ಮೀಟರ್ ಪ್ರದೇಶವನ್ನು ನಿಷೇಧಿತ ವಲಯವನ್ನಾಗಿ ಘೋಷಿಸಲಾಗಿದ್ದು, ಜಿಲ್ಲಾಧಿಕಾರಿ ಗಂಗಾಧರಸ್ವಾಮಿ.ಜಿ.ಎಂ ಅವರು ಈ ಬಗ್ಗೆ ಆದೇಶ ಹೊರಡಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಪೂರ್ವ-ಪರೀಕ್ಷಾ ಸಭೆಯಲ್ಲಿ ಜಿಲ್ಲಾಧಿಕಾರಿ ಅವರು ಪ್ರಾಂಶುಪಾಲರು, ಮೇಲ್ವಿಚಾರಕರು ಮತ್ತು ವೀಕ್ಷಕರೊಂದಿಗೆ ಚರ್ಚಿಸಿದರು. ಪರೀಕ್ಷೆಯ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಮತ್ತು ಯಾವುದೇ ಗೊಂದಲ ಸೃಷ್ಟಿಯಾಗದಂತೆ ಕರ್ತವ್ಯ ನಿಷ್ಠೆಯಿಂದ ನಡೆದುಕೊಳ್ಳುವಂತೆ ಅವರು ಸೂಚನೆ ನೀಡಿದರು.

ಕಟ್ಟುನಿಟ್ಟಿನ ನಿಯಮಗಳು:

· ಎಲ್ಲಾ ನಿಯೋಜಿತ ಅಧಿಕಾರಿಗಳು ಪರೀಕ್ಷೆಗೆ 45 ನಿಮಿಷ ಮುಂಚಿತವಾಗಿ ಕೇಂದ್ರಗಳಲ್ಲಿ ಹಾಜರಾಗಬೇಕು.
· ಪರೀಕ್ಷಾ ಕೊಠಡಿಯೊಳಗೆ ವಾಚ್, ಕ್ಯಾಲ್ಕುಲೇಟರ್, ಬ್ಲೂಟೂತ್ ಸಾಧನಗಳು ಸೇರಿದಂತೆ ಯಾವುದೇ ಎಲೆಕ್ಟ್ರಾನಿಕ್ ವಸ್ತುಗಳನ್ನು ತರುವುದು ನಿಷೇಧ.
· ಪರೀಕ್ಷೆ ಮುಗಿದ ನಂತರ ಗೈರುಹಾಜರಾದ ವಿದ್ಯಾರ್ಥಿಗಳ ವಿವರ ಆನ್ಲೈನ್‌ನಲ್ಲಿ ನವೀಕರಿಸಬೇಕು.
· ಪ್ರತಿ ಕೊಠಡಿಯಲ್ಲಿ ವಿದ್ಯುತ್ ದೀಪ ಮತ್ತು ಶೌಚಾಲಯ ಸೌಕರ್ಯ ಖಾತರಿಪಡಿಸಬೇಕು.

18 ಕೇಂದ್ರಗಳಲ್ಲಿ ಪರೀಕ್ಷೆ:
ಪದವಿಪೂರ್ವ ಶಿಕ್ಷಣ ಉಪನಿರ್ದೇಶಕ ಪಳನಿವಿಲೋ ದೊರೆಸ್ವಾಮಿ ಅವರು ತಿಳಿಸಿದಂತೆ, ನಗರದ 18 ಕೇಂದ್ರಗಳಲ್ಲಿ ಈ ಪರೀಕ್ಷೆ ನಡೆಯಲಿದೆ.

· ಪತ್ರಿಕೆ-1: ಬೆಳಿಗ್ಗೆ 10:30 ರಿಂದ 12:30
· ಪತ್ರಿಕೆ-2: ಮಧ್ಯಾಹ್ನ 2:30 ರಿಂದ 4:30

ಪ್ರತಿ 24 ಅಭ್ಯರ್ಥಿಗಳಿಗೆ ಒಬ್ಬ ಕೊಠಡಿ ಮೇಲ್ವಿಚಾರಕರ ಪ್ರಮಾಣದಲ್ಲಿ ಸಿಬ್ಬಂದಿ ನೇಮಕ. ಅಭ್ಯರ್ಥಿಗಳ ವಿವರ QR ಕೋಡ್ ಸ್ಕ್ಯಾನ್ ಮೂಲಕ ದಾಖಲಾಗುತ್ತದೆ ಮತ್ತು ಎಲ್ಲಾ ಕೊಠಡಿಗಳಲ್ಲಿ ಜಾಮರ್ ವ್ಯವಸ್ಥೆ ಇರುತ್ತದೆ. ಅಭ್ಯರ್ಥಿಗಳ ವಸ್ತ್ರ ಸಂಹಿತೆ (ಡ್ರೆಸ್ ಕೋಡ್) ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ಪ್ರಕಟಿತವಾಗಿದ್ದು, ಅನುಸರಣೆ ಕಡ್ಡಾಯ. ಪ್ರತಿ ಕೇಂದ್ರಕ್ಕೆ ಅಗತ್ಯ ತಪಾಸಣೆಗೆ ಹೋಂಗಾರ್ಡ್ ಮತ್ತು ರೆಡಿಯೋ ಡಿಟೆಕ್ಟರ್ (ಹ್ಯಾಂಡ್ ಮೆಟಲ್ ಡಿಟೆಕ್ಟರ್) ಸಾಧನಗಳು ಒದಗಿಸಲಾಗುವುದು.

ನಿಷೇಧಿತ ವಲಯ ಮತ್ತು ಇತರ ವ್ಯವಸ್ಥೆಗಳು:

· ಪರೀಕ್ಷಾ ಕೇಂದ್ರಗಳ ಸುತ್ತ 200 ಮೀಟರ್ ನಿಷೇಧ ವಲಯ ಜಾರಿ.
· ಹತ್ತಿರದ ಜೆರಾಕ್ಸ್ ಅಂಗಡಿಗಳನ್ನು ಪೊಲೀಸರ ಸಹಾಯದಿಂದ ತಾತ್ಕಾಲಿಕ ಮುಚ್ಚಿಸಲಾಗುವುದು.
· ಪ್ರತಿ ಪರೀಕ್ಷಾ ಕೊಠಡಿಯಲ್ಲಿ ಗಡಿಯಾರ ಇರಿಸಬೇಕು.
· ಪರೀಕ್ಷಾ ವೇಳಾಪಟ್ಟಿ ಕಾಲೇಜುಗಳಲ್ಲಿ ಗಮನಸೆಳೆಯುವಂತೆ ಪ್ರದರ್ಶಿಸಬೇಕು.

ಈ ಸಭೆಗೆ ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್ ಸೇರಿದಂತೆ 18 ಪರೀಕ್ಷಾ ಕೇಂದ್ರಗಳ ಪ್ರಾಂಶುಪಾಲರು ಮತ್ತು ನಿಯೋಜಿತ ಅಧಿಕಾರಿಗಳು ಹಾಜರಿದ್ದರು.

You may also like

Leave a Comment