ದಾವಣಗೆರೆ : ಮನೆ ತುಂಬಿಸಿಕೊಂಡ ಸೊಸೆಯಿಂದಲೇ ಮಾವ ಕೊಲೆಯಾಗಿರುವ ಘಟನೆ ಚನ್ನಗಿರಿ ಹೊರವಲಯದಲ್ಲಿ ನಡೆದಿದೆ..
ಮಾವ ಶಿವಮೂರ್ತಿ ಸೊಸೆ ಸುಮತಿ ಕೊಟ್ಟ ಸುಫಾರಿಯಿಂದ ಪರಲೋಕ ಸೇರಿದವರು…ಇದೊಂದು ಪ್ರೀ ಪ್ಲಾನ್ ಮರ್ಡರ್ ಆಗಿದ್ದು, ಥೇಟ್ ಸಿನಿಮಾ ಸ್ಟೋರಿ ರೀತಿ ಕಥಾಹಂದರವಿದೆ...ಹಾಗಾದ್ರೆ ಈ ಕಥೆಯಲ್ಲಿ ಏನಿದೆ ಮುಂದೆ ಓದಿ..
ಶಿವಮೂರ್ತಿ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಚೌಳೂರು ಗ್ರಾಮದವರು…ತುಮಕೂರಿನಲ್ಲಿ ಹೆಲ್ತ್ ಇನ್ಸ್ಪೆಕ್ಟರ್ ಆಗಿ ಕೆಲಸ ಮಾಡುತ್ತಿರುತ್ತಾರೆ…ಅಲ್ಲದೇ ಬಿಡುವಿನ ಸಮಯದಲ್ಲಿ ಶುಭ ಸಮಾರಂಭಗಳಿಗೆ, ಪ್ರವಾಸಿ ಸ್ಥಳಗಳಿಗೆ ಬಾಡಿಗೆ ಹೋಗುತ್ತಿದ್ದರು…ಹೀಂಗೆ ಬಾಡಿಗೆ ಹೋದ ಶಿವಮೂರ್ತಿ ಬಾರದ ಲೋಕಕ್ಕೆ ಹೊರಟರು..
ಚನ್ನಗಿರಿಯ ಸಮೀಪ ಇವರನ್ನು ಕಾರಿನಲ್ಲಿಯೇ ಹತ್ಯೆ ಮಾಡಲಾಗಿತ್ತು. ಚಿತ್ರದುರ್ಗ ತಾಲೂಕಿನ ಇಂಗಳದಾಳ್ ಲಂಬಾಣಿಹಟ್ಟಿ ಬಳಿ ಜುಲೈ 1ರಂದು ಸುಟ್ಟ ಸ್ಥಿತಿಯಲ್ಲಿ ಇವರ ಶವ ಪತ್ತೆಯಾಗಿತ್ತು. ಅಲ್ಲಿಂದ ಪೊಲೀಸರ ತನಿಖೆ ಶುರುವಾಗಿತ್ತು…ಆದ್ರೆ ಯಾರೊಂದಿಗೂ ದ್ವೇಷ ಕಟ್ಟಿಕೊಳ್ಳದ ಮೃತ ಶಿವಮೂರ್ತಿ ಹತ್ಯೆ ಕೇಸ್ ಪೊಲೀಸರಿಗೆ ದೊಡ್ಡ ಚಾಲೆಂಜ್ ಆಗಿತ್ತು.
ಮುರುಘಾ ಶ್ರೀ ಅರೆಸ್ಟ್ ಮಾಡಿದ್ದ ಬಾಲಚಂದ್ರ ನಾಯ್ಕ್ ರಿಂದ ಆರೋಪಿಗಳ ಸೆರೆ
ಮುರುಘಾ ಶ್ರೀ ಅರೆಸ್ಟ್ ಮಾಡಿದ್ದ ಬಾಲಚಂದ್ರ ನಾಯ್ಕ್ ಈ ಪ್ರಕರಣವನ್ನು ಭೇದಿಸಿದ ಪೊಲೀಸ್…ಶಿವಮೂರ್ತಿ ಹತ್ಯೆಯಾದ ಬಳಿಕ ತನಿಖೆ ಕೈಗೊಂಡ ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ತಂಡ ಚನ್ನಗಿರಿ ಬಳಿ ಇದ್ದ ಕಾರನ್ನು ಪರಿಶೀಲಿಸಿದರು..ನಂತರ ಕಾರಿನಲ್ಲಿದ್ದ ರಕ್ತದ ಕಲೆ ನೋಡಿ ಇದೊಂದು ಫ್ರೀ ಪ್ಲಾನ್ ಮರ್ಡರ್ ಎಂಬ ತೀರ್ಮಾನಕ್ಕೆ ಬಂದಿದ್ದರು..ಅಲ್ಲದೇ ಥೇಟ್ ಸಿನಿಮಾ ಸ್ಟೈಲ್ ನಲ್ಲಿ ಮರ್ಡರ್ ಮಾಡಿಸಿದ್ದ ಸೊಸೆ ಅಂಡ್ ಗ್ಯಾಂಗ್ ನ್ನು ತನಿಖೆಗೆಗೊಳಿಪಡಿಸಿದರು.
ಯಾವಾಗ ಕೊಲೆ?
ಜುಲೈ 2 ರಂದು ಸಂಜೆ ಚಿತ್ರದುರ್ಗ ಹೊರಭಾಗದ ಇಂಗಳದಾಳ್ ಲಂಬಾಣಿಹಟ್ಟಿ ಬಳಿ ಸರ್ಕಾರಿ ಆಸ್ಪತ್ರೆ ಹೆಲ್ತ್ ಇನ್ಸ್ಪೆಕ್ಟರ್ ಭೀಕರ ಕೊಲೆ ನಡೆದಿತ್ತು. ಜೂನ್ 26 ರಂದು ಕಿಡ್ನಾಪ್ ಆಗಿದ್ದ ಹೆಲ್ತ್ ಇನ್ಸ್ಪೆಕ್ಟರ್ ಶಿವಮೂರ್ತಿ (46) ಭೀಕರವಾಗಿ ಕೊಲೆಯಾಗಿದ್ದ. ಬಳಿಕ ಶವ ಎಸೆದು ದುಷ್ಕರ್ಮಿಗಳು ನಾಪತ್ತೆಯಾಗಿದ್ದರು.
ಬಾಡಿಗೆ ಕರೆದು ಮುಹೂರ್ತ ಇಟ್ಟರು
ಶಿವಮೂರ್ತಿ ಬಿಡುವಿನ ವೇಳೆ ಕಾರು ಓಡಿಸ್ತಿದ್ದ ಕಾರಣ ಶಿವಮೊಗ್ಗಕ್ಕೆ ಹೋಗಬೇಕೆಂದು ಕಿಡಿಗೇಡಿಗಳು ಶಿವಮೂರ್ತಿಯನ್ನು ಬಾಡಿಗೆಗೆ ಕರೆದುಕೊಂಡು ಹೋಗಿದ್ದಾರೆ. ಬಳಿಕ ಚನ್ನಗಿರಿ ತಾಲೂಕಿನ ಶ್ರೀನಿವಾಸ ಪುರ ಸಮೀಪ ಅವರನ್ನು ಹತ್ಯೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಅವರ ಕಾರು, ವಾಚ್, ಶೂ ಮಾತ್ರ ಪತ್ತೆಯಾಗಿತ್ತು. ಘಟನಾ ಸ್ಥಳದಲ್ಲಿ ರಕ್ತದ ಕಲೆಗಳು ಕೂಡ ಪೊಲೀಸರಿಗೆ ಸಿಕ್ಕಿತ್ತು. ಈ ಸೀನ್ ನೋಡಿದ್ದ ಪೊಲೀಸರಿಗೆ ಹತ್ಯೆ ಮಾಡಿದ್ದಾರೆ ಅನ್ನೋದು ಕನ್ಪರ್ಮ್ ಆಗಿತ್ತು. ಆದ್ರೆ ಶಿವಮೂರ್ತಿ ಮೃತದೇಹ ಮಾತ್ರ ಪತ್ತೆಯಾಗಿರ್ಲಿಲ್ಲ. ನಂತ್ರ ಜುಲೈ
2 ರಂದು ಸಂಜೆ 5 ಗಂಟೆ ವೇಳೆಗೆ ಇಂಗಳದಾಳ್ ಲಂಬಾಣಿ ಹಟ್ಟಿ ಸಮೀಪದ ಗುಡ್ಡದಲ್ಲಿ ಕೊಳೆತ ಸ್ಥಿತಿಯಲ್ಲಿ ಶಿವಮೂರ್ತಿ ಬಾಡಿ ಸಿಕ್ಕಿತ್ತು. ಆದ್ರೆ ಹಂತಕರು ಯಾರೂ ಅನ್ನೋದು ಮಾತ್ರ ಪೊಲೀಸರಿಗೆ ಯಕ್ಷ ಪ್ರಶ್ನೆಯಾಗಿತ್ತು.
ಶಿವಮೂರ್ತಿ ಕೊಲೆ ಮಾಡಿಸಿದ್ದೆ ಸೊಸೆ ಸುಮತಿ!
ಕೊಲೆ ಜಾಡು ಹಿಡಿದು ಹೊರಟಿದ್ದ ಪೊಲೀಸರು CDR ಪರಿಶೀಲನೆ ಮಾಡ್ತಿದ್ದಂತೆ ಹತ್ಯೆಯ ಹಿಂದಿನ ಕಹಾನಿ ಬಯಲಾಗಿದೆ. ಕೊಲೆಯಾದ ಶಿವಮೂರ್ತಿ ಸೊಸೆ ಸುಮತಿ ಎಂಬ ಐನಾತಿಯೇ ಈ ಹತ್ಯೆಯ ಕಿಂಗ್ ಪಿನ್ ಅನ್ನೋ ಸ್ಫೋಟಕ ಅಂಶ ಬೆಳಕಿಗೆ ಬಂದಿದೆ. ಕಳೆದ ಹಲವು ವರ್ಷಗಳಿಂದ ಪಾಪಿ ಸೊಸೆ ಸುಮತಿ ಚಿತ್ರದುರ್ಗದ ನೂರ್ ಅಹಮದ್ ಅನ್ನೋ ಯುವಕನ ಜೊತೆ ಅನೈತಿಕ ಸಂಬಂಧ ಹೊಂದಿದ್ದಳಂತೆ.
ಇದೇ ವಿಷಯ ಶಿವಮೂರ್ತಿ ಕಿವಿಗೆ ಬೀಳುತ್ತಿದ್ದಂತೆ ನೂರ್ ಅಹಮದ್ಗೆ ಶಿವಮೂರ್ತಿ ವಾರ್ನಿಂಗ್ ಕೂಡ ಕೊಟ್ಟಿದ್ದನಂತೆ. ಇಷ್ಟೆ ಅಲ್ಲದೇ ತಮ್ಮನ ಪತ್ನಿ ಸುಮಿತಿಗೂ ಬೈದು ಬುದ್ದಿ ಮಾತು ಹೇಳಿದ್ದ. ಇದೇ ದ್ವೇಷಕ್ಕೆ ಆರೋಪಿ ಸುಮತಿ ಮಾವ ಶಿವಮೂರ್ತಿ ನಮ್ಮಿಬ್ಬರ ಸಂಬಂಧಕ್ಕೆ ಅಡ್ಡಿಯಾಗ್ತಾನೆ ಎಂದು ಪ್ರಿಯಕರ ನೂರ್ ಜೊತೆ ಸೇರಿ ಕೊಲೆಗೆ ಸ್ಕೇಚ್ ಹಾಕಿದ್ದಳು ಎನ್ನುವ ವಿಚಾರ ತನಿಖೆಯಿಂದ ಬಯಲಾಗಿದೆ.
ಕಾರು ಬಾಡಿಗೆ ಇದೇ ಅಂತ ಸುಳ್ಳು ನಾಟಕವಾಡಿದ್ದ ಆರೋಪಿ ನೂರ್ ಅಹಮದ್ ಸ್ನೇಹಿತರಾದ ಝೇಂಕಾರ್, ಅಕ್ಷಯ್ ಸ್ಕೇಚ್ ಹಾಕಿ ಕಿಡ್ನಾಪ್ ಮಾಡಿದ್ದರು. ಬಳಿಕ ನಾಲ್ಕು ಮಂದಿ ಸೇರಿ ಭೀಕರವಾಗಿ ಹತ್ಯೆ ಮಾಡಿದ್ದು, ಇದೀಗ ನಾಲ್ವರನ್ನೂ ಪೊಲೀಸರು ಬಂಧಿಸಿದ್ದಾರೆ. ಒಟ್ಟಾರೆ ಅಕ್ರಮ ಸಂಬಂಧ ಬೆಳೆಸಿದ್ದ ಸೊಸೆ ಸುಮತಿಗೆ ಬುದ್ದಿ ಮಾತು ಹೇಳಿದ್ದೆ ಶಿವಮೂರ್ತಿಗೆ ಮುಳ್ಳಾಗಿದ್ದು, ಮನೆಗೆ ಆಧಾರ ಸ್ಥಂಭವಾಗಿದ್ದ ಮಾವನನ್ನೇ ಸುಫಾರಿ ಕೊಟ್ಟು ಹತ್ಯೆ ಮಾಡಿಸಿದ್ದು ದುರಂತ.. ಆರೋಪಿತರ ಪತ್ತೆಗಾಗಿ ಪೊಲೀಸ್ ಅಧೀಕ್ಷಕ ರಂಜಿತ್ಕುಮಾರ್ ಬಂಡಾರು, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಶಿವಕುಮಾರ್ ಮಾರ್ಗದರ್ಶನದಲ್ಲಿ ಉಪಾಧೀಕ್ಷ ಅರುಣ್ ನಾಗೇಗೌಡ ನೇತೃತ್ವದಲ್ಲಿ ಗ್ರಾಮಾಂತರ ಪೊಲೀಸ್ ಠಾಣೆ ನಿರೀಕ್ಷಕ ಬಾಲಚಂದ್ರ ನಾಯ್ಕ, ಪಿಎಸ್ ಐ ಸುರೇಶ್ ರುಕ್ಕಮ್ಮ ಹಾಗೂ ಸಿಬ್ಬಂದಿ ಒಳಗೊಂಡ ತಂಡ ರಚಿಸಿದ್ದು, ಪ್ರಕರಣ ಬೇಧಿಸುವಲ್ಲಿ ಯಶಸ್ವಿಯಾದ ಪೊಲೀಸ್ ಅಧಿಕಾರಿ, ಸಿಬ್ಬಂದಿ ಕಾರ್ಯವನ್ನು ಅಧೀಕ್ಷಕರು ಶ್ಲಾಘಿಸಿ, ಬಹುಮಾನ ಘೋಷಿಸಿದ್ದಾರೆ.