ಪ್ರೀತಿ ಮಾಡಿ, ಜೀವ ಬೆದರಿಕೆ ಇದೆ..ರಕ್ಷಣೆ ಕೊಡಿಯೆಂದು ಪೊಲೀಸ್ ಠಾಣೆಗೆ ಹೋದ್ರು…ಆದರೆ ಠಾಣೆ ಆವರಣದಲ್ಲಿ ನಡೆಯಿತು ಘೋರ ಘಟನೆ

Spread the love

ದಾವಣಗೆರೆ : ಹಕ್ಕಿಯಂತೆ ಹಾರುತ್ತಿದ್ದ ಜೋಡಿ ಹಕ್ಕಿ ಇನ್ನೇನೂ ಗೂಡು ಸೇರಬೇಕೆನ್ನಿಸುವಷ್ಟರಲ್ಲಿ ರಣಹದ್ದು ದಾಳಿ ಮಾಡಿದೆ…ಇದು ಯಾವುದೇ ಹಕ್ಕಿ ಕಥೆಯಲ್ಲ…ಇದು ದಾವಣಗೆರೆ ಜಿಲ್ಲೆಯ ಬಸವಾಪಟ್ಟಣದ ಪ್ರೇಮಿಗಳ ಕಥೆ..‌

ಚನ್ನಗಿರಿ ದಾಗಿನಕಟ್ಟೆ ಗ್ರಾಮದ ಲೀಲಾವತಿ(18) ಹಾಗೂ ಕಂಚುಗಾರನಹಳ್ಳಿಯ ಸಿದ್ದೇಶ್ (22) ಪರಸ್ಪರ ಪ್ರೀತಿಸಿ ಇತ್ತೀಚಿಗೆ ಮದುವೆಯಾಗಿದ್ದರು..ಇನ್ನೇನೂ ಹನಿಮೂನ್ ಗೆ ಹೊರಡಬೇಕಿದ್ದ ಜೋಡಿಗೆ ಒಂದು ಶಾಕ್ ಕಾದಿತ್ತು..‌ಅಷ್ಟಕ್ಕೂ ಅದೇನೆಂತೀರಾ ಈ ಸ್ಟೋರಿ ನೋಡಿ…

ಲೀಲಾವತಿ ಹಾಗೂ ಸಿದ್ದೇಶ್ ಪಾರ್ಕ್, ಸಿನಿಮಾ, ಪಿಸು..ಪಿಸು ಮಾತುಗಳನ್ನಾಡಯತ್ತಾ ಕಾಲ ಕಳೆಯುತ್ತಿದ್ದರು…ಹೀಗಿರುವಾಗ ಪ್ರೀತಿ ಮೊಳಕೆಯೊಡೆದು ಹೆಮ್ಮೆರವಾದ ವೇಳೆ ಮದುವೆಯಾಗಬೇಕೆನಿಸಿದೆ..‌ಆದರೆ ಈ ಮದುವೆ ಲೀಲಾವತಿ ಮನೆಯವರ ವಿರೋಧವಿತ್ತು…ಹುಡುಗಿ ಮನೆಯವರು ಹುಡುಗ ಕಂಚುಗಾರನಹಳ್ಳಿ ಸಿದ್ದೇಶ್ ಸಿಗಲಿ ಅಂತ ಕಾಯುತ್ತಿದ್ದರು.‌‌..ಹೀಗಿರುವಾಗ ಈ ಪ್ರೇಮಿಗಳು ತಮಗೆ ಪ್ರಾಣ ಬೆದರಿಕೆ ಇದೆ..ರಕ್ಷಣೆ ಕೊಡಿ ಎಂದು ದಾವಣಗೆರೆ ಎಸ್ಪಿ ಶೇಖರ್ ಬಳಿ ಹೋಗಿದ್ದಾರೆ.‌‌ಆಗ ಎಸ್ಪಿ ಸ್ಥಳೀಯ ಠಾಣೆಗೆ ಹೋಗಿ ಅಲ್ಲಿ ನಿಮಗೆ ರಕ್ಷಣೆ ಕೊಡುತ್ತಾರೆ ಅಂತ ಹೇಳಿದ್ದಾರೆ..ಆಗ ಪ್ರೇಮಿಗಳು ಬಸವಾಪಟ್ಟಣ ಪೊಲೀಸ್ ಠಾಣೆಗೆ ಹೋಗಿದ್ದಾರೆ.‌‌‌‌..ಈ ಸಮಯವನ್ನೇ ಕಾಯುತ್ತಿದ್ದ ಹುಡುಗಿ ಮನೆಯವರು ಹುಡುಗನಿಗೆ ಚಾಕು ಇರಿದಿದ್ದಾರೆ..

ಪೊಲೀಸ್ ಠಾಣೆ ಬಳಿಯೇ ಚಾಕು ಇರಿತ

ಪ್ರೀತಿಸಿ ಮದ್ವೆಯಾದ ಯುವ ಜೋಡಿಗೆ ಬಸವಾ ಪಟ್ಟಣ ಪೊಲೀಸ್ ಠಾಣೆ ಆವರಣದಲ್ಲಿಯೇ ಚಾಕುನಿಂದ ಹತ್ಯೆಗೆ ಯತ್ನಿಸಲಾಗಿದೆ.ಹುಡುಗಿಯ ಸಂಬಂಧಿಕರಿಂದ ಚಾಕುವಿನಿಂದ ದಾಳಿ ನಡೆದಿದೆ. ಯುವಕನಿಗೆ ಗಂಭೀರ ಗಾಯವಾಗಿ ಆಸ್ಪತ್ರೆ ಗೆ ದಾಖಲು ಮಾಡಲಾಗಿದೆ. ಸಿದ್ದೇಶ್ ಹಾಗೂ ಲೀಲಾವತಿ ಬಸವಾಪಟ್ಟಣ ಪೊಲೀಸ್ ಠಾಣೆಗೆ ಹೋಗುತ್ತಿದ್ದಂತೆ ಹುಡುಗಿಯ ಸಂಬಂಧಿಕರು ದಾಳಿ ಮಾಡಿದ್ದಾರೆ.. ಠಾಣೆಯ ಹೊರಭಾಗದಲ್ಲಿ ದಂಪತಿ ನಿಂತಿದ್ದಾಗ ಅಲ್ಲಿಗೆ ಬಂದ ಹುಡುಗಿ  ಮಾವ ನಾಗರಾಜ್, ಏಕಾಏಕಿ ಯುವತಿಯ ಮೇಲೆ ಚಾಕುವಿನಿಂದ ದಾಳಿ ಮಾಡಲು ಯತ್ನಿಸಿದ್ದಾನೆ. ತಕ್ಷಣವೇ ಪತ್ನಿಯ ರಕ್ಷಣೆಗೆ ಧಾವಿಸಿದ ಸಿದ್ದೇಶ್‌ಗೆ ಆರೋಪಿ ಚಾಕುವಿನಿಂದ ಸರಣಿ ಇರಿತಗಳನ್ನು ಮಾಡಿದ್ದಾನೆ. ಪರಿಣಾಮವಾಗಿ ಸಿದ್ದೇಶ್ ಅವರ ಕೈ, ಭುಜ ಹಾಗೂ ಪಕ್ಕೆಲಬಿನ ಭಾಗಕ್ಕೆ ಗಾಯಗಳಾಗಿವೆ. ಸದ್ಯ ಯುವಕ ಸಿದ್ದೇಶ್ ಕೈಗೆ ಗಂಭೀರಗಾಯವಾಗಿದ್ದು.ದಾವಣಗೆರೆ ಎಸ್ ಎಸ್ ಆಸ್ಪತ್ರೆ ಯಲ್ಲಿ ಶಸ್ತ್ರ ಚಿಕಿತ್ಸೆ ಮಾಡಲಾಗುತ್ತಿದೆ.ಹುಡುಗಿಯ ಸಂಬಂಧಿಗಳಾದ ನಾಗರಾಜ್ ಹಾಗೂ ಇತರರು ಸೇರಿ ಚಾಕುವಿನಿಂದ ದಾಳಿ ನಡೆಸಿರುವ ಮಾಹಿತಿ ಇದೆ. ಬಸವಾಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಂತರ ಇನ್ನಷ್ಟು ಮಾಹಿತಿ ದೊರೆಯಲಿದೆ

Leave a Reply

Your email address will not be published. Required fields are marked *