ಭದ್ರಾವತಿ : ನಾವು ಬಡವರಿಗಾಗಿ ಸಾಮಾಜಿಕ ಭದ್ರತೆಗಳ ಸಮಸ್ಯೆಗಳ ನಿವಾರಣೆಗೆ ಕಾರ್ಯಕ್ರಮ ಹಮ್ಮಿಕೊಂಡಿದ್ದೀವೆ…ಇದನ್ನು ಟೀಕಿಸುವ ನೈತಿಕತೆ ಬಿಜೆಪಿ ಹಾಗೂ ಜೆಡಿಎಸ್ ಗೆ ಇಲ್ಲ ಎಂದು ಶಾಸಕ ಸಂಗಮೇಶ್ ಹೇಳಿದರು.
ನಗರದ ಕನಕಮಂಟಪದಲ್ಲಿ ನಡೆದ ಸಾಮಾಜಿಕ ಭದ್ರತಾ ಯೋಜನೆಗಳಡಿ ಮಾಸಿಕ ಪಿಂಚಣಿ ಹಾಗೂ ವೇತನ ಪಡೆಯುವ ಅಂಗವಿಕಲರು, ವಿಧವೆಯರು ಹಾಗೂ ಹಿರಿಯ ನಾಗರಿಕರ ಕುಂದು ಕೊರತೆ ನಿವಾರಣಾ ಸಭೆಯಲ್ಲಿ ಮಾತನಾಡಿದರು..
ಈ ಕಾರ್ಯಕ್ರಮ ಹಮ್ಮಿಕೊಂಡಿರುವುದು ಬಡವರಿಗಾಗಿ..ಇದರಲ್ಲಿ ಯಾವುದೇ ರಾಜಕೀಯ ಇಲ್ಲ..ಜನರಿಂದ ಜನರಿಗಾಗಿ ಜನರಿಗೋಸ್ಕರ ಹಮ್ಮಿಕೊಂಡಿದ್ದೇವೆ.ಆದರೆ ಪ್ರತಿಪಕ್ಷಗಳು ಇದನ್ನು ಟೀಕಿಸುತ್ತೇವೆ...ಏನೋ ಮಾಡೋದಕ್ಕೆ ಆಗೋದಿಲ್ಲ..ನಮ್ಮ ಕೆಲಸ ನಾವು ಮಾಡುತ್ತೇವೆ.ಟೀಕಿಸೋದು ಅವರ ಕೆಲಸ...ಕೆಲಸ ಮಾಡೋದು ನಮ್ಮ ಕೆಲಸ ಎಂದು ತಿರುಗೇಟು ನೀಡಿದರು.
ರಾಜ್ಯ ಸರ್ಕಾರದ ವಿವಿಧ ಪಿಂಚಣಿ ಯೋಜನೆಗಳು ಸ್ಥಗಿತ ವಾಗಿದ್ದು ಯಾವ ಕಾರಣಗಳಿಂದ ಸ್ಥಗಿತವಾಗಿವೆ ಎಂದು ಮರುಪರಿಶೀಲನೆ ಮಾಡುವುದು ಕಾರ್ಯಕ್ರಮ ಉದ್ದೇಶ. ಆದ್ದರಿಂದ ಭದ್ರಾವತಿ ತಾಲೂಕಿನ ಸುಮಾರು ಹತ್ತು ಸಾವಿರ ಪಲಾನುಭವಿಗಳಿಗೆ ಶೀಘ್ರದಲ್ಲಿ ಪಿಂಚಣಿ ಹಣವನ್ನು ಕೊಡಿಸುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮಾಧ್ಯಮದವರ ಪ್ರಶ್ನೆ ಗೆ ಉತ್ತರಿಸಿ ದ ಶಾಸಕರು ಈ ಕಾರ್ಯಕ್ರಮದ ಉದ್ದೇಶವನ್ನು ತಿಳಿಯದೆ ಟೀಕಿಸಿದ BJP ಹಾಗು JDS ಮುಖಂಡರಿಗೆ ತಿರುಗೇಟು ನೀಡಿ, ಬಡವರ ಕಷ್ಟಗಳಿಗೆ ಸ್ಪಂದನೆ ನೀಡುವ ಸಮಾಜ ಮುಖಿ ಕಾರ್ಯಕ್ರಮವನ್ನು ಟಿಕೀಸುವ ನೈತಿಕತೆ ಅವರಿಗಿಲ್ಲ ಎಂದರು
