ಪಿಡಿಒ ಕಿರುಕುಳ ಕೊಟ್ರು ಅಂತ ಡೆತ್ ನೋಟ್, ಬಿಲ್ ಕಲೆಕ್ಟರ್ ಆತ್ಮಹತ್ಯೆ …

Spread the love

ಜಗಳೂರು: ಪಿಡಿಒ ಕಿರುಕುಳ ಕೊಟ್ರು ಎಂದು ಆರೋಪಿಸಿ ಬಿಲ್ ಕಲೆಕ್ಟರ್ ರೊಬ್ಬರು ಆತ್ಮಹತ್ಯೆ ಮಾಡಿರುವ ಘಟನೆ ತಾಲ್ಲೂಕಿನ ಕಾಟೇನಹಳ್ಳಿ ಗ್ರಾಮದಲ್ಲಿ ನಡೆದಿದೆ.ತಾಲ್ಲೂಕಿನ ಬಿಳಿಚೋಡು ಗ್ರಾಮ ಪಂಚಾಯಿತಿಯಲ್ಲಿ ಬಿಲ್‌ ಕಲೆಕ್ಟರ್ ಆಗಿ ಕೆಲಸ ಮಾಡುತ್ತಿದ್ದ ಕಾಟೇನಹಳ್ಳಿ ಗ್ರಾಮದ ಶಿವಣ್ಣ(49) ಆತ್ಮಹತ್ಯೆ ಮಾಡಿಕೊಂಡವರು.23 ವರ್ಷದಿಂದ ಬಿಳಿಚೋಡು ಗ್ರಾಮ ಪಂಚಾಯಿತಿಯಲ್ಲಿ ನೀರುಗಂಟಿಯಾಗಿ ಕೆಲಸ ನಿರ್ವಹಿ-ಸುತ್ತಿದ್ದರು. ಈಚೆಗೆ ಬಡ್ತಿ ಹೊಂದಿ ಕಂದಾಯ ತೆರಿಗೆ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.ಇವರಿಗೆ ಪುತ್ರ, ಇಬ್ಬರು ಪುತ್ರಿಯರು ಇದ್ದಾರೆ.

ಪಿಡಿಒ ನಂದಿಲಿಂಗೇಶ್ವ‌ರ್ ಅವರು ನೀಡುತ್ತಿದ್ದ ಕಿರುಕುಳದಿಂದ ನಾನು ಅನಿವಾರ್ಯವಾಗಿ ಸಾವಿಗೆ ಶರಣಾಗುತ್ತಿದ್ದೇನೆ’ ಎಂದು ಶಿವಣ್ಣಡೆತ್‌ ನೋಟ್ ಬರೆದಿಟ್ಟಿದ್ದಾರೆ. ತಂದೆಯ ಸಾವಿಗೆ ಕಾರಣರಾದ ಪಿಡಿಒ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಶಿವಣ್ಣ ಪುತ್ರ ಒತ್ತಾಯಿಸಿದ್ದಾರೆ.ಈ ಬಗ್ಗೆ ಬಿಳಿಚೋಡು ಪೊಲೀಸ್ ಠಾಣೆಗೆ ಅಶೋಕ್ ಎಂಬುವವರು ದೂರು ನೀಡಿದ್ದಾರೆ.

Leave a Reply

Your email address will not be published. Required fields are marked *